ಕ್ರೆಸ್ ವಿಲಿಯನ್ ಸಂಸ್ಕøತಿ	 

	ಇಂಗ್ಲೆಂಡಿನ ಡರ್ಬಿಷೈರ್ ಮತ್ತು ನಾಟಿಂಗ್ಹ್ಯಾಮ್‍ಷೈರ್‍ಗಳ ಎಲ್ಲೆಯಲ್ಲಿರುವ ಕ್ರೆಸ್ವಿಲ್ ಕ್ರ್ಯಾಗ್ಸ್ ಎಂಬಲ್ಲಿಯ ಬೆಟ್ಟದ ಗುಹೆಗಳಲ್ಲಿ ದೊರಕಿರುವ ಪೂರ್ವ ಮತ್ತು ಮಧ್ಯಶಿಲಾಯುಗದ ಅವಶೇಷಗಳಿಂದ ವ್ಯಕ್ತವಾಗಿರುವ ಸಂಸ್ಕøತಿ, ಪೂರ್ವ ಶಿಲಾಯುಗದ ಅಂತ್ಯದಲ್ಲಿದ್ದ ಆರಿಗ್ನೇಷಿಯನ್ ಗ್ರಾವಿಟ್ಟಿಯನ್, ಮ್ಯಾಡಲೀನಿಯನ್ ಮುಂತಾದ ಐರೋಪ್ಯ ಸಮಕಾಲೀನ ಸಂಸ್ಕøತಿಗಳ ಹಲವಾರು ಲಕ್ಷಣಗಳು ಈ ಸಂಸ್ಕøತಿಯಲ್ಲಿ ಕಂಡುಬಂದರೂ ಅವುಗಳ ಉನ್ನತ ಮಟ್ಟವನ್ನು ತಲುಪದಿದ್ದ ಮತ್ತು ಬಹುಶ: ಇಂಗ್ಲೆಂಡಿನಲ್ಲೇ ಬೆಳೆದು ತನ್ನದೇ ಆದ ವೈಶಿಷ್ಟ್ಯವನ್ನು ರೂಪಿಸಿಕೊಂಡ ಸಂಸ್ಕøತಿಗಳಲ್ಲಿ ಇದಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಕಲ್ಲುಫಲಕದ ಆಯುಧಗಳನ್ನು ಒಂದು ಪಕ್ಕ ಮೊಂಡು ಮಾಡಿದ ಚಾಕು, ಮೊನೆಗಳು, ಎರಡು ಸಾಲು ಹಲ್ಲುಗಳಿದ್ದ ಜಿಂಕೆ ಕೊಂಬಿನ ಈಟಿಗಾಳ ಮುಂತಾದ ಆಯುಧಗಳನ್ನು, ಬಳಸುತ್ತಿದ್ದ ಈ ಸಂಸ್ಕøತಿಯಲ್ಲಿ ಕ್ರಮೇಣ ಸೂಕ್ಷ್ಮ ಶಿಲಾಯುಧ ಹಂತದ ಜ್ಯಾಮಿತಿಕ ಆಕಾರಗಳಿದ್ದ ಉಪಕರಣಗಳು ಬಳಕೆಗೆ ಬಂದುವು.  (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ